ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳು ಇಂದು ಲಿಂಗೈಕ್ಯರಾಗಿದ್ದಾರೆ. ಸಾವಿರಾರೂ ಭಕ್ತಧಿಗಳ ಪಾಲಿನ ದೇವರಾಗಿರುವ ಅವರು ಇಂದು ದೇವರ ಬಳಿ ಹೋಗಿದ್ದಾರೆ. ಶ್ರೀಗಳ ಅಗಲಿಕೆ ಎಲ್ಲರಿಗೂ ತುಂಬ ನೋವಿನ ಸಂಗತಿಯಾಗಿದೆ. ಕಾಯಕ ಯೋಗಿ, ನಡೆದಾಡುವ ದೇವರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 11:44 ಕ್ಕೆ ಕೊನೆಯೂಸಿರೆಳೆದಿದ್ದಾರೆ.